Affiliated to Bangalore University, the courses offered are Approved and Recognized by Govt. of Karnataka.
ಅನುಪಮಾ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ಕಾಲೇಜಿನ ಕನ್ನಡ ವಿಭಾಗವು ಹಲವಾರು ಚಟುವಟಿಕೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಕಾರ್ಯಕ್ರಮಗಳು ವಿಭಾಗದ ಹಾಗೂ ಕಾಲೇಜಿನ ಮೆರಗನ್ನು ಉನ್ನತಿಗೊಳಿಸುತ್ತಿದೆ.
ಕನ್ನಡ ವಿಭಾಗದ ಉಪನ್ಯಾಸಕರ ಕ್ರಿಯಾಶೀಲ ಆಲೋಚನೆಗಳಿಂದ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಅಭಿರುಚಿ ಮತ್ತು ಆಸಕ್ತಿ ಉಂಟಾಗುತ್ತಿದ್ದು ಪ್ರತಿ ವರ್ಷ ಕನ್ನಡ ಹಬ್ಬ ಎಂದೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಆಧುನಿಕ ಬದುಕಿನ ಯಾಂತ್ರಿಕ ಜಗತ್ತಿನ ನಡುವೆ ಕನ್ನಡ ಮನಸುಗಳನ್ನ ಬೆಸೆಯುವ ಕೆಲಸ ನಡೆಯುತ್ತಿದ್ದು ಇದಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿಂಧು ಎನ್ ಶೆಟ್ಟಿರವರ ಸಹಕಾರ ಪ್ರಶಂಸನಿಯವಾಗಿದೆ.
ಸಾಹಿತ್ಯದ ಸ್ಪರ್ಧೆಗಳು, ಕವಿಗೋಷ್ಠಿಗಳು, ಉಪನ್ಯಾಸಗಳು, ಹಲವು ಪ್ರಕಟಣೆಗಳು ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದನ್ನೆಲ್ಲಾ ಕನ್ನಡ ವಿಭಾಗದ ಉಪನ್ಯಾಸಕರಾದ ವರಲಕ್ಷ್ಮಿ ಎನ್ ರವರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಮಕ್ಕಳಲ್ಲಿ ಪ್ರತಿನಿತ್ಯ ಕನ್ನಡ ವಿಷಯ ಕುರಿತು ವಿವಿಧ ವಿನೂತನ ಚಟುವಟಿಕೆಗಳನ್ನು ಮಾಡಿಸುತ್ತಾರೆ. ಅಲ್ಲದೆ ಕಾಲೇಜಿನ ಸೂಚನಾ ಫಲಕದಲ್ಲಿ ಕನ್ನಡಕ್ಕೆ ಸಂಬಂಧಿಸಿದ ವಿಷಯಗಳು, ದಿನಪತ್ರಿಕೆ, ವಾರಪತ್ರಿಕೆ ಗಳಲ್ಲಿ ವಿಶೇಷ ಮಾಹಿತಿಗಳನ್ನು ಅಂಟಿಸುವುದು ಈ ರೀತಿಯಾಗಿ ಮಾಡುವುದರ ಮೂಲಕ ಕನ್ನಡ ಭಾಷೆಯ ಅಭಿಮಾನದ ಜೊತೆಗೆ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಆಲೋಚನೆಯನ್ನು ಬೆಳೆಸಲು ಹಾಗೂ ಕನ್ನಡ ಮನಸ್ಸುಗಳನ್ನು ಇನ್ನಷ್ಟು ಗಟ್ಟಿಗೊಳಿಸಿ ಬೆಳೆಸಲು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಕನ್ನಡ ಭಾಷೆಯ ಬಗ್ಗೆ ಇನ್ನಷ್ಟು ಒಲವು ಆಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲಾಗುತ್ತಿದೆ. ಆ ಮೂಲಕ ವಿದ್ಯಾರ್ಥಿಗಳು ಸಾಹಿತ್ಯದ ಮುಂದಿನ ರೂವಾರಿಗಳು ಆಗಬೇಕೆಂಬುದೇ ನಮ್ಮ ಆಶಯ.
CA Site No.6 (P), West of Chord Road, 2nd Stage, Mahalakshmipuram, Bangalore-560086.
Call: 080-23493096
Email: info@anupamacollege.com
Anupama College of Management & Science offers a variety of valuable courses and optional subjects (Full time Programme) such as BCA, B.com and M.com.
Copyright © 2024 Anupama College of Management & Science. All Rights Reserved.